ಸುದ್ದಿ - ಸುತ್ತೋಲೆ

ಸಂಘವು ಸಾಗಿಬಂದ ಹಾದಿ

ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆ ನೌಕರರ ಸಹಕಾರ ಸಂಘವು ನೋಂದಣಿ ಸಂಖ್ಯೆ:1054 ಯೊಂದಿಗೆ ಎ.ಆರ್.ಬಿ. ದಿನಾಂಕ 9-6-1959 ರಂದು ಪ್ರಾರಂಭವಾಯಿತು. ನೋಂದಣಿ ವೇಳೆ ಸಂಘದ ಹೆಸರು ಮೈಸೂರು ಲೇಬರ್ ಡಿಪಾರ್ಟಮೆಂಟ್ ಎಂಪ್ಲಾಯೀಸ್ ಸಹಕಾರ ಸಂಘ ನಿಯಮಿತ, ಬೆಂಗಳೂರು ಎಂದು ನೊಂದಾಯಿಸಲಾಗಿತ್ತು. ಅಂದಿನ ಕಾರ್ಮಿಕ ಅಯುಕ್ತತರಾದ ಶ್ರೀ.ಕೆ.ಆರ್.ಮರಿದೇವಗೌಡರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆಯನ್ನು ನೆರವೇರಿಸಿದ್ದರು. ಆರಂಭದ ದಿನಗಳಲ್ಲಿ ಸಂಘದಲ್ಲಿ ಸಾಲ ನೀಡಬೇಕಾದಾಗ ಸಂಘವು ಕೆಲವು ವರ್ಷಗಳ ಕಾಲ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಾಲವನ್ನು ಪಡೆದು ಸದಸ್ಯರಿಗೆ ನೀಡಿರುತದೆ. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನಿವೃತ್ತರಾದ ದಿವಂಗತ ಶ್ರೀ.ಹ.ತ. ಬಸೇಗೌಡರವರು ಸಹ ವೇತನ ಕಾರ್ಯದರ್ಶಿಗಳಾಗಿ ಸ್ಥಾನ ನಿರ್ವಹಿಸಿದರು...
...ಮುಂದೆ ಓದಿರಿ

ಅರ್ಜಿಯ ನಮೂನೆಗಳು/Membership Forms [PDF download]:

  1. SmartCard ಸದಸ್ಯತ್ವದ ಅರ್ಜಿ [SmartCard Application]
  2. ಸದಸ್ಯತ್ವದ ಅರ್ಜಿ [Membership Application]
    ಸದಸ್ಯತ್ವದ ಅರ್ಜಿಯ ಜೊತೆಗೆ ಇತ್ತೀಚಿನ ಮಾಸಿಕ ವೇತನ ಪಟ್ಟಿ ಮತ್ತು ಆಧಾರ್ ಕಾರ್ಡ್ ಅಡಕ/Xerox ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸುವುದು.
  3. ಗೃಹ ಸಾಲದ ಅರ್ಜಿ [House Loan Application]
  4. ವಿದ್ಯಾಭ್ಯಾಸ ಸಾಲದ ಅರ್ಜಿ [Education Loan Application]
  5. ಆರ್.ಡಿ. ಖಾತೆಯ ಅರ್ಜಿ [Recurring Deposit Application]

ಆತ್ಮೀಯ ಸದಸ್ಯರೇ/ನೌಕರ ಬಾಂಧವರೇ,

ಮೇಲ್ಕಂಡ ನಮ್ಮ ಸಂಘವು, ಸಹಕಾರ ಸಂಘ ನಿಬಂಧಕರ ಕಛೇರಿಯ ನೋಂದಣಿ ಸಂಖ್ಯೆ: 1054 ಎ.ಆರ್.ಬಿ., ದಿನಾಂಕ : 09-06-1959 ರಂದು ನೋಂದಣಿಯೊAದಿಗೆ ಪ್ರಾರಂಭವಾಗಿ, ಈ ಸಂಘವು 65 ವರ್ಷಗಳಿಂದ ಸತತವಾಗಿ ಮೂರು ಇಲಾಖೆಗಳ ನೌಕರರ ಸಹಕಾರದಿಂದ ಅಭಿವೃದ್ದಿ ಹೊಂದುತ್ತಾ, ಪ್ರಸ್ತುತ ಸುಮಾರು 1300 ಸದಸ್ಯರನ್ನು ಹೊಂದಿರುತ್ತದೆ. ಈ ಸಹಕಾರ ಸಂಘವು ಸತತವಾಗಿ ಕಳೆದ ಇಪ್ಪತ್ತು ವರ್ಷಗಳಿಂದ ವಾರ್ಷಿಕ ವ್ಯವಹಾರದ ಲೆಕ್ಕಪರಿಶೋಧನೆಯಲ್ಲಿ “ಎ” ಶ್ರೇಣಿಯಲ್ಲಿದ್ದು, ಬಹಳ ಅಭಿವೃದ್ದಿ ಹೊಂದುತ್ತಾ ಈ ಕೆಳಕಂಡ ವಿವಿಧ ಸಾಲ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸುತ್ತಾ ಮುನ್ನಡೆಯುತ್ತಿದೆ.

  • 1) ವಿದ್ಯಾಭ್ಯಾಸದ ಸಾಲ - ರೂ.1,00,000/-(ಮರುಪಾವತಿ ಅವಧಿ 25 ಕಂತುಗಳು)
  • 2) ಮನೆ ರಿಪೇರಿ/ಮನೆಕಟ್ಟಲು ಸಾಲ-6,00,000/-(ಮರು ಪಾವತಿ ಅವಧಿ 60 ಕಂತುಗಳು)
  • 3) ಸಂಚಿತ ಠೇವಣಿ (ಆರ್.ಡಿ) ಸೌಲಭ್ಯ.
  • 4) ಸಾಲದಲ್ಲಿ ಅರ್ಧದಷ್ಟು (50%) ಸಾಲವನ್ನು ಮರುಪಾವತಿ ಮಾಡಿದ್ದರೆ TOP-UP ಸೌಲಭ್ಯದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
  • 5) ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 40+40 ಸದಸ್ಯರ ಮಕ್ಕಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರವನ್ನು ನೀಡಿ ಸರ್ವಸದಸ್ಯರ ಸಭೆಯಲ್ಲಿ ಸನ್ಮಾನಿಸಲಾಗುತ್ತಿದೆ.
  • 6) ಪರಸ್ಪರ ಸಹಾಯ ಧನ ಮತ್ತು ಮಿತವ್ಯಯ ಧನ ಖಾತೆಯಲ್ಲಿರುವ ಹಣಕ್ಕೆ ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತಿದೆ.
  • 7) ಮರಣೋತ್ತರ ನಿಧಿಯಿಂದ ಹಾಲಿ ರೂ.15000/- ಗಳನ್ನು ಸದಸ್ಯರು ಮರಣ ಹೊಂದಿದ್ದಲ್ಲಿ ಸಹಾಯವಾಗಿ ನೀಡಲಾಗುತ್ತಿದೆ.
  • 8) ಸದಸ್ಯರು ನಿವೃತ್ತಿಯಾದಾಗÀ/ಸ್ವಯಂ ನಿವೃತ್ತಿಯಾದಾಗ/ಕಾಲವಾದವರಿಗೆ ಕಾಲ್‌ಮನಿ (ಪೋತ್ಸಾಹ ಧನ) ಕನಿಷ್ಠ ರೂ.5,000/- ಗಳಿಂದ ಗರಿಷ್ಡ ರೂ.12,000/- ವರೆಗೆ ನೀಡಲಾಗುತ್ತಿದೆ.
  • 9) ಸಂಘದ 65 ವರ್ಷದ ಸರ್ವ ಸದಸ್ಯರ ಸಭೆ ನಿರ್ಣಯದಂತೆ ಸಂಘದ ಸದಸ್ಯರ ವಿಕಲಚೇತನ ಮಕ್ಕಳಿಗೆ ಒಂದು ಸಲಕ್ಕೆ ಮಾತ್ರ ಧನ ಸಹಾಯವನ್ನು ನೀಡುವ ಸೌಲಭ್ಯವಿರುತ್ತದೆ.
  • 10) ಸಂಘವು ನೀಡುವ ಎಲ್ಲಾ ಸಾಲಗಳ ಮೇಲೆ ವಾರ್ಷಿಕ ಬಡ್ಡಿ ದರ ಶೇ.9% ರಷ್ಟು ಮಾತ್ರವಿರುತ್ತದೆ.
  • 11) ಡಿವಿಡೆಂಡ್ (ಲಾಭಾಂಶ) ಕಳೆದ 5 ವರ್ಷಗಳಲ್ಲಿನ ಪಕ್ಷಿ ನೋಟ :
ಕ್ರ.ಸಂ ವರ್ಷ ಶೇ.ಲಾಭಾಂಶ
1. 2019-20 17
2. 2020-21 17
3. 2021-22 18
4. 2022-23 18
5. 2023-24 19

ಸಂಘದ ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿರಲು ಗಣಕೀಕೃತಗೊಳಿಸಲಾಗಿದೆ. ಮತ್ತು ಸಂಘದ ವೆಬ್‌ಸೈಟ್ : klete.coopsociety.in , ಇ-ಮೇಲ್ : klete.cosociety@gmail.com ಮತ್ತು ದೂರವಾಣಿ ಸಂಖ್ಯೆ : 26753083, 8867643090 ಯನ್ನು ಹೊಂದಿದ್ದು, ತಾವು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆ ಸುಮಾರು 3500 ಕ್ಕೂ ಹೆಚ್ಚು ಇರುವುದರಿಂದ ಕಾರ್ಯಕಾರಿ ಮಂಡಳಿಯು ನೌಕರರ ಸಹಕಾರ ಸಂಘಕ್ಕೆ ಸದಸ್ಯತ್ವ ಪಡೆಯಲು “ಸದಸ್ಯತ್ವ ಅಭಿಯಾನ” ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಈ ಸಂಘದಲ್ಲಿ ಸದಸ್ಯರಾಗದೆ ಇರುವ ನೌಕರರು ಸಹಕಾರ ಸಂಘದ ಸದಸ್ಯತ್ವ ಪಡೆದು, ಇಲ್ಲಿ ಲಭ್ಯವಿರುವ ಎಲ್ಲಾ ಸವಲತ್ತುಗಳನ್ನು ಪಡೆದು ತಾವೂ ಅಭಿವೈದ್ದಿಯಾಗುವುದರೊಂದಿಗೆ ಸಹಕಾರ ಸಂಘವನ್ನು ಇನ್ನೂ ಹೆಚ್ಚು ಅಭಿವೃದ್ದಿಯೆಡೆಗೆ ಮುನ್ನಡೆಸಬೇಕೆಂಬ ಹಾಗೂ ಸದಸ್ಯತ್ವದ ಅಭಿಯಾನಕ್ಕಾಗಿ ಸಂಘದ ವತಿಯಿಂದ ಪ್ರವಾಸ ಕೈಗೊಂಡಾಗ, ಎಲ್ಲಾ ನೌಕರ ಮಿತ್ರರು ಸಂಘದ ಕಾರ್ಯಕಾರಿ ಮಂಡಳಿಯವರೊAದಿಗೆ ಸಹಕರಿಸಲು ಕೋರುತ್ತೇವೆ.

ಹೊಸ ಸದಸ್ಯತ್ವ ಪಡೆಯಲು ಪಾವತಿಸಬೇಕಾದ ಮೊತ್ತ : 3637=00 ರೂ

ಕ್ರ.ಸಂ ವಿವರ ರೂ
1. ಪ್ರವೇಶ ಧನ 50.00
2. ಷೇರು ಫೀ 60.00
3. ಷೇರು ಧನ 2000.00
4. ಪರಸ್ಪರ ಸಹಾಯ ಧನ 350
5. ಮಿತವ್ಯಯ ಧನ 350
6. ಮರಣೋತ್ತರ ನಿಧಿ 5.00
7. ಪ್ರತಿಭಾ ಪುರಸ್ಕಾರ ನಿಧಿ 22.00
8. ಕಟ್ಟಡ ನಿಧಿ 500.00
9. ಆರ್.ಡಿ ಖಾತೆ 300.00
ಒಟ್ಟು ರೂ. 3637.00

ಪ್ರತಿ ತಿಂಗಳು ಸಂಘಕ್ಕೆ ಪಾವತಿಸಬೇಕಾದ ಮೊತ್ತ : 1542=00 ರೂ

ಕ್ರ.ಸಂ ವಿವರ ರೂ
1. ಷೇರು ಧನ 500.00
2. ಷೇರು ಫೀ 15.00
3. ಪರಸ್ಪರ ಧನ 350.00
4. ಮಿತವ್ಯಯ ಧನ 350.00
5. ಆರ್.ಡಿ 300.00
6. ಮರಣೋತ್ತರ ನಿಧಿ 5.00
7. ಪ್ರತಿಭಾ ಪುರಸ್ಕಾರ ನಿಧಿ 22.00
ಒಟ್ಟು ರೂ 1542

ಸೂಚನೆ: ಸಂಘದಲ್ಲಿ ಸದಸ್ಯತ್ವ ಪಡೆಯುವವರು ಎರಡು ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಒಂದು ತಿಂಗಳ ಸಂಬಳದ ಪಟ್ಟಿಯನ್ನು ಅರ್ಜಿ ಜೊತೆ ಲಗತ್ತಿಸತಕ್ಕದ್ದು.

ಸಂಘದ ಬ್ಯಾಂಕ್ ಖಾತೆ ವಿವರ ಹಾಗೂ ಕೆ-2 ರಸಿಪೆಂಟ್ ಸಂಖ್ಯೆ:

KLETE CO-OP SOCIETY BANGLORE-29

Bank Details

STATE BANK OF INDIA,

NIMHANS BRANCH

CURRENT A/C NO:64039511028

IFSC CODE NO: SBIN0040675

MICRO NO: 560002480

RECIPIENT ID NO: 2100248006(FOR K-2 BILLING)

ಕ್ರಮ ಸಂಖ್ಯೆ ಕಾರ್ಯಕಾರಿ ಮಂಡಳಿಯ ನಿರ್ದೇಶಕರ ಹೆಸರು ಪದನಾಮ ದೂರವಾಣಿ ಸಂಖ್ಯೆ
1. ಶ್ರೀ ಲಿಂಗರಾಜೇಗೌಡ. ಎ.ಎಂ. ಅಧ್ಯಕ್ಷರು 8867060070
2. ಶ್ರೀ ಬಿ.ಟಿ. ರಂಗನಾಯ್ಕ ಉಪಾಧ್ಯಕ್ಷರು 7022229489
3. ಶ್ರೀ ವಿಶ್ವನಾಥ ಎಂ ವಿ ವ್ಯವಸ್ಥಾಪಕ ನಿರ್ದೆಶಕರು 9980129681
4. ಶ್ರೀ ರವಿಕುಮಾರ್. ಕೆ ಖಜಾಂಚಿ 9964458917
5. ಹರ್ಷವರ್ಧನ ಹೆಚ್.ಆರ್ ನಿರ್ದೇಶಕರು 8892908576
6. ಧರಣಿ ಕೆ.ಬಿ ನಿರ್ದೇಶಕರು 9480087941
7. ಸ್ವಾಮಿ ಹೆಚ್.ಟಿ ನಿರ್ದೇಶಕರು 9844569633
8. ವೆಂಕಟೇಶ ಜಿ. ನಿರ್ದೇಶಕರು 9945442127
9. ಚನ್ನಂಕೇಗೌಡ ಹೆಚ್.ಪಿ ನಿರ್ದೇಶಕರು 9844703800
10. ವಿನೋದ್ ಕೆ.ಎನ್ ನಿರ್ದೇಶಕರು 9902066255
11. ಮಂಜುಳ ಎಸ್. ನಿರ್ದೇಶಕರು 8762292336
12. ಜಯಂತಿ ಎಸ್ ನಿರ್ದೇಶಕರು 9483958216
13. ಇಮ್ರಾನ್ ನಿರ್ದೇಶಕರು 9945331767
14. ಜಯಶ್ರೀ ಕೆ. ನಿರ್ದೇಶಕರು 8660553360
15. ವನಜಾಕ್ಷೀ ಬಿ.ಎನ್ ನಿರ್ದೇಶಕರು 9964198243

ವಂದನೆಗಳೊoದಿಗೆ,

ವಿಶೇಷ ಸೂಚನೆ :- ಸಂಘದ ಎಲ್ಲಾ ಸದಸ್ಯರಲ್ಲಿ ವಿನಂತಿಸಿಕೊಳ್ಳುವುದೇನೆoದರೆ ಸಂಘದ ಸದಸ್ಯತ್ವ ಪಡೆಯದೇ ಇರುವವರಿಗೆ ಮೇಲಿನ ಎಲ್ಲಾ ಸಂಘದ ಸೌಲಭ್ಯಗಳನ್ನು ಮನವರಿಕೆ ಮಾಡಿ ಸಂಘoದ ಸದಸ್ಯರಾಗುವಂತೆ ಪ್ರೋತ್ಸಾಹಿಸುವಂತೆ ಕೋರಲಾಗಿದೆ.

ಕಾರ್ಯದರ್ಶಿ
(ಸುರೇಶ್ ಎಂ.)